-->

Encrypting your link and protect the link from viruses, malware, thief, etc! Made your link safe to visit.

General Science Biology In Kannada

 ಜೀವಕೋಶ


♦ ಜೀವಕೋಶವು ಜೀವಿಯ ರಚನಾತ್ಮಕ ಹಾಗೂ ಕಾರ್ಯ ನಿರ್ವಾಹಕ ಘಟಕವಾಗಿರುತ್ತದೆ.


♦ ಜೀವಕೋಶದ ಮೂಲ ಘಟಕಕ್ಕೆ ಜೀವಕೋಶವೆಂದು ಹೆಸರಿಸಿದವರು 'ರಾಬರ್ಟ್ ಹುಕ್'


♦ ಜೀವಕೋಶದಲ್ಲಿ ಮೂರು ಪ್ರಮುಖ ಭಾಗಗಳು ಇವೆ, ಅವುಗಳೆಂದರೆ : 


ಕೋಶಪೊರೆಕೋಶದ್ರವ್ಯಕೋಶಬೀಜ


♦ ಕೋಶಪೊರೆ :  ಜೀವಕೋಶವನ್ನು ರಕ್ಷಿಸಿ ಕೋಶದೊಳಗೆ ಹೋಗುವ ಮತ್ತು ಬರುವ ವಸ್ತುಗಳ ಚಲನೆಯನ್ನು ನಿಯಂತ್ರಿಸುವುದೇ ಕೋಶಪೊರೆ. ಕೋಶಪೊರೆ ಅತ್ಯಂತ ಸೂಕ್ಷ್ಮವಾದ ಪೊರೆಯಾಗಿದ್ದು ಜೀವಕೋಶವನ್ನು ಕೋಟೆಯಂತೆ ಆವರಿಸುತ್ತದೆ ಹಾಗೆಯೇ ಜೀವಕೋಶಕ್ಕೆ ನಿರ್ದಿಷ್ಟ ಆಕಾರ ನೀಡುತ್ತದೆ. 


♦ ಕೋಶದ್ರವ್ಯ : ಇದು ಕೋಶಪೊರೆ ಮತ್ತು ಕೋಶಬೀಜದ ನಡುವೆ ಇರುವ ದ್ರವವಾಗಿದೆ. 


♦ ಕೋಶಕೇಂದ್ರ (ಕೋಶಬೀಜ) : ಇದು ಜೀವಕೋಶದ ಮಧ್ಯೆ ಇರುವಂತಹ ಕಾಯ. ಇದು ನಾಲ್ಕು ಮುಖ್ಯ ಭಾಗಗಳನ್ನು ಹೊಂದಿದ್ದು 'ವರ್ಣಜಾಲ' ಎಂಬ ದಾರದಂತಹ ರಚನೆ ಪ್ರಮುಖವಾದುದು. ಇದು ಕೋಶ ವಿಭಜನೆಯ ಸಮಯದಲ್ಲಿ ಸಣ್ಣ ತಂತುಗಳಾಗಿ ಮಾರ್ಪಡುತ್ತದೆ. ಕೋಶ ಬೀಜವು ಕಿರುಕೋಶಬೀಜಗಳನ್ನು ಸಹ ಒಳಗೊಂಡಿರುತ್ತದೆ. ಕೋಶಕೇಂದ್ರ ದ್ರವ್ಯದಲ್ಲಿ ಕಾಣುವ ದಾರದ ಎಳೆಗಳಂತಹ ರಚನೆಗಳನ್ನು 'ಕ್ರೊಮ್ಯಾಟಿನ್' ಎಂದು ಕರೆಯುತ್ತಾರೆ. 


♦ ನ್ಯೂಕ್ಲಿಯರ್ ಪೊರೆ :ಕೋಶಕೇಂದ್ರವನ್ನು ಆವರಿಸಿರುವ ಪೊರೆಯಾಗಿದೆ. ಇದರಲ್ಲಿ ಸಣ್ಣ ಸಣ್ಣ ರಂಧ್ರಗಳಿದ್ದು ಅವುಗಳ ಮೂಲಕ ಕೋಶಕೇಂದ್ರದ ಒಳಗೆ ಹಾಗೂ ಹೊರಗೆ ರಾಸಾಯನಿಕ ವಸ್ತುಗಳ ಸಾಗಾಣಿಕೆಯನ್ನು ನಿಯಂತ್ರಿಸುತ್ತದೆ.


♦ ಕಿರುಕೋಶ ಬೀಜ : ಕಿರುಕೋಶ ಬೀಜವು ರೈಬೋಸ್ ನ್ಯೂಕ್ಲಿಕ್ ಆಮ್ಲ ಮತ್ತು ಸಸಾರಜನಕದಿಂದ ಆಗಿರುತ್ತದೆ.


 


ಜೀವಕೋಶದ ವಿವಿಧ ಕಣದಂಗಗಳು ಮತ್ತು ಅವುಗಳ ಕ್ರಿಯೆಗಳು : 


♦ ಮೈಟೋಕಾಂಡ್ರಿಯಾ (ಶಕ್ತಿ ಉತ್ಪಾದನಾ ಕೇಂದ್ರ) :ಮೈಟೋಕಾಂಡ್ರಿಯಾ ಕಣದಂಗಗಳನ್ನು ವಿಜ್ಞಾನಿ 'ಕೊಲ್ಲಿಕರ್' ಕಂಡುಹಿಡಿದರು. ಇದು ಕೋಶದ ಉಸಿರಾಟ ಕೇಂದ್ರವಾಗಿದೆ. ಇಲ್ಲಿ ಶಕ್ತಿ ಬಿಡುಗಡೆಯಾಗುವುದರಿಂದ ಇದನ್ನು ಜೀವ ಕೋಶದ ಶಕ್ತಿ ಕೇಂದ್ರ ಎನ್ನುವರು.


♦ ರೈಬೋಸೋಮ (ಪ್ರೋಟೀನ್ ಕಾರ್ಖಾನೆ) :1955ರಲ್ಲಿ 'ಫ್ಯಾರಡೆ' ರೈಬೋಸೋಮ್ ಕಣದಂಗಗಳನ್ನು ಕಂಡುಹಿಡಿದರು. ಇದು ಸಸಾರಜನಕ ತಯಾರಿಸುವುದರೊಂದಿಗೆ ರೈಬೋಸೋಮುಗಳು ಪ್ರೋಟೀನ್ ಉತ್ಪಾದನೆಯಲ್ಲಿ ಸಹಾಯ ಮಾಡುತ್ತದೆ.


♦ ಗಾಲ್ಗಿ ಸಂಕೀರ್ಣ : ಇದರ ಮುಖ್ಯ ಕಾರ್ಯ ಪ್ರೋಟೀನುಗಳನ್ನು ಸಂಗ್ರಹಿಸಿ ಜೀವಕೋಶಕ್ಕೆ ಬೇಕಾದ ಕಿಣ್ವಗಳನ್ನು ಉತ್ಪಾದಿಸುತ್ತದೆ. ಲೈಸೋಸೋಮ್ ಗಳನ್ನು ಉತ್ಪತ್ತಿ ಮಾಡಲು ಇದು ನೆರವಾಗುತ್ತದೆ. 


♦ ಕೋಶರಸಾಂತರ ಜಾಲ :  ಇದು ಕೋಶಪೊರೆಯಿಂದ ಕೋಶ ಬೀಜದವರೆಗೆ ಹರಡಿರುವ ನಳಿಕೆಗಳ ಜಾಲವಾಗಿದೆ.


 


ಜೀವಕೋಶದ ವಿವಿಧ ಕಣದಂಗಗಳು ಮತ್ತು ಅವುಗಳ ಕ್ರಿಯೆಗಳು : 


♦ ಸೆಂಟ್ರಿಯೋಲ್ : ಕೋಶಕೇಂದ್ರದ ಸಮೀಪದಲ್ಲಿ ಇರುವ ಕಣದಂಗವಾಗಿದ್ದು ಕೋಶ ವಿಭಜನೆಯ ಸಂದರ್ಭದಲ್ಲಿ ಕದಿರಿನ ಎಳೆಗಳನ್ನು ಉತ್ಪತ್ತಿ ಮಾಡುತ್ತದೆ.


♦ ವರ್ಣಜಾಲ (ಕ್ರೋಮ್ಯಾಟಿನ್) :ಅನುವಂಶಿಕ ಲಕ್ಷಣಗಳನ್ನು ಪೀಳಿಗೆಯಿಂದ ಪೀಳಿಗೆಗೆ ವರ್ಗಾಯಿಸುತ್ತದೆ. ಇದು ಡಿ.ಎನ್.ಎ ಮತ್ತು ಪ್ರೋಟೀನ್ ಗಳಿಂದ ಮಾಡಲ್ಪಟ್ಟಿವೆ.


♦ ಲೈಸೋಜೋಮ್ : ಅನುಪಯುಕ್ತ ವಸ್ತು ಮತ್ತು ಮುದಿ ಕೋಶಗಳ ನಾಶಕ್ಕೆ ಕಾರಣವಾಗುತ್ತದೆ. ಆದ್ದರಿಂದ ಇದನ್ನು 'ಆತ್ಮಹತ್ಯಾ ಸಂಚಿ' ಎಂದು ಕರೆಯುತ್ತಾರೆ. ಲೈಸೋಸೋಮ್ ಕಣದಂಗಗಳನ್ನು ಕಂಡುಹಿಡಿದ ವಿಜ್ಞಾನಿ ಕ್ರಿಶ್ಚಿಯನ್-ಡಿ-ಡು.


♦ ಕಿರುಕೋಶಬೀಜ ಕೇಂದ್ರ : ಇದು ದೇಹದಲ್ಲಿ ಸಸಾರಜನಕ ತಯಾರಿಸಲು ಬೇಕಾದ ವಸ್ತುಗಳನ್ನು ಸಜ್ಜುಗೊಳಿಸುತ್ತದೆ. 


♦ ಸಮರೂಪಿ ವರ್ಣತಂತುಗಳು : ಕೋಶಗಳಲ್ಲಿ ಜೋಡಿಯಾಗಿರುವ ವರ್ಣತಂತುಗಳಿಗೆ ಸಮರೂಪಿ ವರ್ಣತಂತುಗಳು ಎನ್ನುವರು. ಇವುಗಳಲ್ಲಿ ಒಂದು ವರ್ಣತಂತುವು ಎರಡು ಸಮಾನಾಂತರ ಎಳೆಗಳಿಂದ ಕೂಡಿರುತ್ತದೆ. ಇವುಗಳನ್ನು ಬಂಧಿಸುವ ಬಿಂದುವನ್ನು 'ಸೆಂಟ್ರಿಯೋಮಿಯರ್' ಎನ್ನುವರು.


♦ ಕ್ಲೋರೋಪ್ಲಾಸ್ಪ್ (ಹರಿತ್ತು) : ಸಸ್ಯಕೋಶಗಳಲ್ಲಿ ಕಂಡುಬರುವ ಹಸಿರಾದ ಮತ್ತು ದ್ಯುತಿಸಂಶ್ಲೇಷಣೆ ಕ್ರಿಯೆ ನಡೆಯುವ ಕೇಂದ್ರ ಮತ್ತು ಸೌರಶಕ್ತಿಯನ್ನು ರಾಸಾಯನಿಕ ಶಕ್ತಿಯನ್ನಾಗಿ ಪರಿವರ್ತಿಸುವುದು.


♦ ಎಂಡೋಪ್ಲಾಸ್ಮಿಕ್ ರೆಟಿಕ್ಯೂಲಮ್ ಕೋಶಕ್ಕೆ ಆಂತರಿಕವಾಗಿ ಆಧಾರ ನೀಡುವುದು ಮತ್ತು ಪ್ರೋಟಿನನ್ನು ಸಾಗಿಸುತ್ತದೆ.


 


ಜೀವಕೋಶದ ಆಧಾರದ ಮೇಲೆ ಜೀವಿಗಳ ವಿಂಗಡನೆ :


♦ ಏಕಕೋಶ ಜೀವಿಗಳು : ಇವು ಒಂದೇ ಜೀವಕೋಶವನ್ನು ಹೊಂದಿದ್ದು ಆ ಜೀವಕೋಶವು ಎಲ್ಲ ಕ್ರಿಯೆಗಳನ್ನು ಕೈಗೊಳ್ಳುತ್ತದೆ. 


♦ ಬಹುಕೋಶೀಯ ಜೀವಿಗಳು : ಇವು ಒಂದಕ್ಕಿಂತ ಹೆಚ್ಚು ಜೀವಕೋಶಗಳನ್ನು ಹೊಂದಿದ್ದು, ವಿಶಿಷ್ಟ ಅಂಗಾಂಶ, ಅಂಗ ಮತ್ತು ಅಂಗವ್ಯೂಹ ಹೊಂದಿದ ಜೀವಿಗಳನ್ನು ಬಹುಕೋಶಿಯ ಜೀವಿಗಳು ಎಂದು ಕರೆಯುತ್ತಾರೆ.


 


ಕೋಶ ವಿಭಜನೆ : 


ಒಂದು ಜೀವಕೋಶ ಪ್ರೌಢಾವಸ್ಥೆ ತಲುಪಿದಾಗ ವಿಭಜನೆ ಹೊಂದಿ ಎರಡು ಮರಿಕೋಶಗಳಾಗುವ ಕ್ರಿಯೆಗೆ ಕೋಶ ವಿಭಜನೆ ಎನ್ನುವರು. ಏಕಕೋಶ ಜೀವಿಗಳಲ್ಲಿ ಈ ವಿಭಜನೆ ಆ ಜೀವಿಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ, ಆದರೆ ಬಹುಕೋಶ ಜೀವಿಗಳಲ್ಲಿ ಬೆಳವಣಿಗೆ, ಸವೆದ ಭಾಗಗಳ ದುರಸ್ತಿ, ಪ್ರಜನನ ಕ್ರಿಯೆಗಳು ನಡೆಯುತ್ತದೆ. ಕೋಶ ವಿಭಜನೆಯಲ್ಲಿ ಎರಡು ವಿಧಗಳಿವೆ. ಅವು


1. ಮೈಟೋಸಿಸ್


2. ಮಿಯಾಸಿಸ್


1. ಮೈಟೋಸಿಸ್ : ಇದು ಮೇಲ್ವರ್ಗದ ಸಸ್ಯ ಹಾಗೂ ಪ್ರಾಣಿಗಳ ವರ್ಧನ ಕೋಶಗಳಲ್ಲಿ ಸಾಮಾನ್ಯವಾಗಿರುತ್ತದೆ. ಪ್ರೌಢಕೋಶವು ಎರಡು ಮರಿಕೋಶಗಳಾಗಿ ವಿಭಜಿಸುತ್ತದೆ. ಈ ವಿಭಜಿತ ಕೋಶಗಳಲ್ಲೂ ಪ್ರೌಢಕೋಶದಲ್ಲಿದ್ದಷ್ಟೆ ವರ್ಣರೇಖೆಗಳು ಇರುತ್ತವೆ. 


2. ಮಿಯಾಸಿಸ್ : ವರ್ಣರೇಖೆಗಳನ್ನು ದ್ವಿಗುಣಿತ ಸ್ಥಿತಿಯಿಂದ ಏಕಸ್ಥಿತಿಗೆ ಇಳಿಸುವ ಕೋಶ ವಿಭಜನೆಯಲ್ಲಿ ಮೊದಲು ಸಂಖ್ಯಾಕ್ಷೀಣ ವಿಭಜನೆಯಾಗಿ ನಂತರ ಸಮಭಾಜಕ ವಿಭಜನೆಯಾಗುತ್ತದೆ.


ಬಾಲ್ಯಾವಸ್ಥೆ (Child hood Stage)


ವ್ಯಕ್ತಿಯ ಜೀವನದ ಎರಡನೇ ಪ್ರಮುಖ ಹಂತವೆಂದರೆ ಬಾಲ್ಯಾವಸ್ಥೆ. ಅದು ವ್ಯಕ್ತಿಯ ಜೀವನದ ಪ್ರಾರಂಭದ 2ನೇ ವರ್ಷದಿಂದ 12 ವರ್ಷದವರೆಗಿನ ಕಾಲಾವಧಿಯಾಗಿದ್ದು ಈ ಅವಧಿಯು ಜೀವನದ ತಳಹದಿಯಾಗಿದೆ. ಅವಧಿಯನ್ನು "ಶಾಲಾವಧಿ” ಎಂದು ಕರೆಯುತ್ತಾರೆ.


 


ಬಾಲ್ಯಾವಸ್ಥೆಯನ್ನು ಪ್ರಮುಖವಾಗಿ ಎರಡು ಹಂತಗಳಾಗಿ ವಿಂಗಡಿಸಬಹುದು.


ಬಾಲ್ಯಾವಸ್ಥೆ


ಪೂರ್ವಬಾಲ್ಯಾವಸ್ಥೆ


ಉತ್ತರಬಾಲ್ಯಾವಸ್ಥೆ


2ನೇ ವರ್ಷದಿಂದ 6ನೇ ವರ್ಷದವರೆಗೆ


6ನೇ ವರ್ಷದಿಂದ 12ನೇ ವರ್ಷದವರೆಗೆ


 ಬಾಲ್ಯಾವಸ್ಥೆಯು ವ್ಯಕ್ತಿಯ ಜೀವನದಲ್ಲಿ ಹವ್ಯಾಸಗಳು, ಪ್ರವೃತ್ತಿಗಳು ಬೆಳೆಯುವ ಕಾಲವಾಗಿದ್ದು ಈ ಅವಧಿಯಲ್ಲಿ ಮಗುವಿನ ದೈಹಿಕ, ಮಾನಸಿಕ, ಭಾವನಾತ್ಮಕ ಅಂಶಗಳಲ್ಲಿ ಸಾಕಷ್ಟು ಬದಲಾವಣೆಯಾಗುತ್ತದೆ.


 


ಬಾಲ್ಯಾವಸ್ಥೆಯಲ್ಲಾಗುವ ದೈಹಿಕ ಬೆಳವಣಿಗೆ (Physical change During Child hood period) :-


# ಪೂರ್ವ ಬಾಲ್ಯಾವಸ್ಥೆಯಲ್ಲಿ ದೈಹಿಕ ಬೆಳವಣಿಗೆ ಹೆಚ್ಚಾಗಿದ್ದು ಸರಾಸರಿ 3 ಅಂಗುಲದಷ್ಟು ವಾರ್ಷಿಕವಾಗಿ ಹೆಚ್ಚಾಗುತ್ತದೆ. ಎತ್ತರವು ಮೂರುವರೆ ಅಡಿಯಷ್ಟು ಹೆಚ್ಚಾಗುತ್ತದೆ. ತೂಕವು ಶೈಶಾವಸ್ಥೆಯ ತೂಕಕ್ಕಿಂತ ಏಳು ಪಟ್ಟು ಹೆಚ್ಚಾಗುತ್ತದೆ. ವಾರ್ಷಿಕವಾಗಿ ಸುಮಾರುಏಳು ಕೆ.ಜಿಯಷ್ಟು ತೂಕ ಹೆಚ್ಚಾಗುತ್ತದೆ. ಸ್ನಾಯುಗಳು ದೊಡ್ಡದಾಗಿ ಮೈಕಟ್ಟಿನ ವ್ಯಕ್ತಿಯಾಗುತ್ತಾನೆ. ಅಸ್ಥಿಗಳು ಗಟ್ಟಿಯಾಗುತ್ತದೆ.


# ಉತ್ತರ ಬಾಲ್ಯಾವಸ್ಥೆಯಲ್ಲಿ ದೈಹಿಕ ಬೆಳವಣಿಗೆ ನಿಧಾನವಾಗಿ ಸಾಗುತ್ತದೆ. ಈ ಹಂತದಲ್ಲಿ ಮಗುವು 2 ಅಂಗುಲದಷ್ಟುದೊಡ್ಡವನಾಗುತ್ತಾನೆ. ಈ ಹಂತದಲ್ಲಿ ಎದೆ, ಹಣೆಗಳು ಅಗಲವಾಗುತ್ತವೆ. ತುಟಿಗಳು ತುಂಬಿಕೊಳ್ಳುತ್ತವೆ. ಉದರ ಚಪ್ಪಟೆಯಾಗುತ್ತದೆ. ಕೈಕಾಲು ಉದ್ದ ಹಾಗೂ ದೊಡ್ಡದಾಗುತ್ತದೆ. ಈ ಹಂತದ ಅಂತ್ಯದ ವೇಳೆಗೆ ಸುಮಾರು 28 ಹಲ್ಲುಗಳು ಬರುತ್ತವೆ. ಈ ಹಂತದಲ್ಲಿ ಹುಡುಗಿಯರು ಹುಡಗರಿಗಿಂತ ದೊಡ್ಡವರಂತೆ ಕಾಣಿಸುತ್ತಾರೆ.


 


ಮಾನಸಿಕ ವಿಕಾಸ (Mental development During Child hood period) :-


# ಪೂರ್ವ ಬಾಲ್ಯಾವಸ್ಥೆಯಲ್ಲಿ ಕೆಲವು ಮೂಲ ಕ್ರಿಯೆಗಳಿಂದ ಬಟ್ಟೆ ಧರಿಸುವ, ಸ್ನಾನ ಮಾಡುವ, ತಲೆ ಬಾಚುವ  ಕೌಶಲ್ಯವನ್ನುಅನುಕರಣೆಯಿಂದ ಪಡೆಯುತ್ತದೆ. ಚಿಕ್ಕ ಉಪಕರಣಗಳನ್ನು ಬಳಸುವ ಸಾಮಾರ್ಥ್ಯ ಹೊಂದಿರುತ್ತದೆ. ಪೆನ್ನು ಪೇಪರ ಬಳಸುವ, ಪೆನ್ಸಿಲ್ ಬಳಸುವ, ಸಾಮಾರ್ಥ್ಯ ಹೊಂದುವುದು ಕೆಲವು ಸಾಮಾನ್ಯ ಪದಗಳನ್ನು 3 ವರ್ಷದ ಮಗು 3 ರಿಂದ 4 ಪದಗಳನ್ನೊಳಗೊಂಡ ವಾಕ್ಯವನ್ನು ರಚಿಸುತ್ತದೆ. ಹೆಚ್ಚು ಕ್ರಿಯಾಶೀಲವಾದ ಮಗುವು ಹೆಚ್ಚು ಹೆಚ್ಚು ಪದಗಳನ್ನು ಬಳಸಿ ವಾಕ್ಯ ಮಾಡುತ್ತಾನೆ. ನಿರ್ದಿಷ್ಟ ವಸ್ತುಗಳನ್ನು ಅವುಗಳ ಸೂಕ್ಷ್ಮ ಗುಣಗಳನ್ನಾದರಿಸಿ ವರ್ಗೀಕರಿಸುತ್ತಾನೆ. ಈ ಹಂತದಲ್ಲಿ ತೂಕ, ಸಂಖ್ಯೆ, ಲಿಂಗ, ಸಾವುಗಳ ಪರಿಕಲ್ಪನೆಬೆಳೆಯುತ್ತದೆ. ಹುಟ್ಟು ಸಾವು ಎಂಬುದು ತಿಳಿಯುತ್ತದೆ. ಅದ್ದರಿಂದಲೆ ಈ ಕಾಲವನ್ನು”ಕಾರ್ಯಪೂರ್ವ ಹಂತ” ಎನ್ನುವರು.


# ಉತ್ತರ ಬಾಲ್ಯದಲ್ಲಿ ಮಾನಸಿಕ ವಿಕಾಸವಾಗಿ ಅನೇಕ ಕೌಶಲ್ಯ ಪರಿಸ್ಥಿತಿಗಳನ್ನು ತನ್ನದಾಗಿಸಿಕೊಳ್ಳುತ್ತಾನೆ. ಸೂಕ್ಷ್ಮವಾದ ಚಲನವಲನವನ್ನು ಚಟುವಟಿಕೆಯಲ್ಲಿ ತೊಡಗುತ್ತಾನೆ.


# ಉತ್ತರ ಬಾಲ್ಯಾದಲ್ಲಿ ಭಾಷಾ ಕಲಿಕೆ ಹೆಚ್ಚು ವೇಗದಲ್ಲಿ ಸಾಗುತ್ತದೆ. ಈ ಹಂತದಲ್ಲಿ ಮಗುವಿನ ಉತ್ತಮವಾದ ಅವಕಾಶ ದೊರೆತರೆ 6 ರಿಂದ 7 ವರ್ಷದ ಮಗು 2000 ದಿಂದ 2400 ವರೆಗಿನ ಪದಗಳನ್ನುಕಲಿಯುತ್ತಾನೆ. ಈ ಹಂತದಲ್ಲಿ ಸಂಕೇತಗಳನ್ನು, ಗುಪ್ತ ಸಂಕೇತಗಳನ್ನು, ಕಾಲದ ಬಗ್ಗೆ ಪರಿಕಲ್ಪನೆಯನ್ನು, ಅಳತೆಗೆ ಸಂಬಂಧಿಸಿದ ಪದಗಳನ್ನು ನುಡಿಗಳನ್ನು ತೀವ್ರವಾಗಿ ಕಲಿಯುತ್ತಾನೆ. ಉತ್ತರ ಬಾಲ್ಯದಲ್ಲಿ ಭಾಷಾ ಸಾಮರ್ಥ್ಯ ಹೆಚ್ಚಾಗಿರುತ್ತದೆ. ಈ ಹಂತದಲ್ಲಿ ನಿರ್ದಿಷ್ಟವಾಗಿ ಪರಿಕಲ್ಪನೆಯನ್ನು ಹೊಂದುತ್ತಾನೆ.  ಅದುದ್ದರಿಂದ ಈ ಹಂತವನ್ನು ”ಮೂರ್ತ ಕಾರ್ಯಗಳ” ಹಂತ ಎಂದು ಕರೆಯುವರು.


# ಈ ಹಂತದಲ್ಲಿ ಸಂವೇದನೆ ಹೆಚ್ಚಾಗಿದ್ದು ಸಂವೇಗನಾತ್ಮಕತೆಯಿಂದ ಮಗು ಅಳುವುದು, ನಾಚುವುದನ್ನು ಮಾಡುತ್ತದೆ. ಈ ಹಂತದಲ್ಲಿಆನಂದ, ಸುಖ, ಸಂತೋಷ, ಪ್ರೀತಿ, ವಾತ್ಸಲ್ಯ, ಉತ್ಸುಕತೆ, ನೋವು ಮುಂತಾದ ಭಾವನೆಗಳನ್ನು ವ್ಯಕ್ತಪಡಿಸುತ್ತದೆ. ಮಗುವಿನಲ್ಲಿ ಮತ್ಸರವಿಲ್ಲದೆ, ಮೆಚ್ಚುಗೆಯ ಭಾವನೆ ಬೆಳೆಯುತ್ತದೆ. ಈ ಹಂತದಲ್ಲಿ ಕಾಮ ಪ್ರವೃತ್ತಿಯು ಕೂಡ ಸುಪ್ತವಾಗಿರುತ್ತದೆ.


 


ಸಾಮಾಜಿಕ ವಿಕಾಸ (Social development) :-


ಬಾಲ್ಯಾವಸ್ಥೆಯಲ್ಲಿ ಸ್ನೇಹಜೀವಿಯಾಗಿ ಸ್ನೇಹಿತರೊಂದಿಗೆ ಹೊಂದಿಕೊಳ್ಳುವ ಅವರೊಂದಿಗೆ ವಿಶ್ವಾಸಗಳಿಸಲುಪ್ರಯತ್ನಿಸುತ್ತಾರೆ. ಸಮಾಜದೊಂದಿಗೆ ಬೆರೆಯುವ ಗುಣವನ್ನು ಹೊಂದಿರುತ್ತಾನೆ. ಶೈಶಾವಸ್ಥೆಯಲ್ಲಿ ಹೊಂದಿದ ಅಹಂ ಕೇಂದ್ರೀಕೃತ ಏಕಾಂಗಿತನ ಹೋಗಲಾಡಿಸಿ ಸಮಾಜ ಜೀವಿಯಾಗಿ ಬದುಕಲು ಪ್ರಯತ್ನಿಸುತ್ತಾನೆ. ಕ್ರೀಡೆಯಲ್ಲಿ ಹೆಚ್ಚು ಆಸಕ್ತಿ ವಹಿಸುತ್ತಾರೆ. ಈ ಹಂತದಲ್ಲಿ ಮಗು ಗುಂಪಿನ ಚಟುವಟಿಕೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದರಿಂದ ಉತ್ತರ ಬಾಲ್ಯಾವಸ್ಥೆಯನ್ನು ”ಕೂಟ ಯುಗ”ಎನ್ನುವರು.

ST

Get Your Link BELOW