-->

Encrypting your link and protect the link from viruses, malware, thief, etc! Made your link safe to visit.

ಭಾರತ ರತ್ನ ಪ್ರಶಸ್ತಿ ಪುರಸ್ಕೃತರ ಪಟ್ಟಿ(1954-2021)

ಭಾರತ ರತ್ನ ಭಾರತದ ನಾಗರಿಕರಿಗೆ ದೊರೆಯಬಹುದಾದ ಅತ್ಯುನ್ನತ ಪ್ರಶಸ್ತಿ. ಭಾರತ ರತ್ನ ಪ್ರಶಸ್ತಿಯನ್ನು ಕಲೆ, ಸಾಹಿತ್ಯ, ವಿಜ್ಞಾನ, ಸಾರ್ವಜನಿಕ ಸೇವೆ ಮತ್ತಿತರ ಕ್ಷೇತ್ರಗಳಲ್ಲಿ ಅತಿ ದೊಡ್ಡ ಸಾಧನೆಗಳನ್ನು ತೋರಿದ ಗಣ್ಯರಿಗೆ ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು 1954 ರಲ್ಲಿ ಆರಂಭಿಸಲಾಯಿತು. ಆಗ ಈ ಪ್ರಶಸ್ತಿಯನ್ನು ಯಾರಿಗೂ ಮರಣಾನಂತರ ಪ್ರಧಾನ ಮಾಡುವ ಉದ್ದೇಶವಿರಲಿಲ್ಲ.


ಮಹಾತ್ಮ ಗಾಂಧಿಯವರಿಗೆ ಈ ಪ್ರಶಸ್ತಿ ದೊರಕದ್ದಕ್ಕೆ ಪ್ರಮುಖ ಕಾರಣ ಇದೇ ಇದ್ದೀತು. 1966ರ ನಂತರ ಮರಣಾನಂತರವೂ ಈ ಪ್ರಶಸ್ತಿಯನ್ನು ಪ್ರದಾನ ಮಾಡಲು ಅವಕಾಶ ಸೃಷ್ಟಿಯಾಯಿತು (ಇದುವರೆಗೆ ಒಟ್ಟು ಹದಿನಾಲ್ಕು ವ್ಯಕ್ತಿಗಳಿಗೆ ಅವರ ಮರಣಾನಂತರ ಭಾರತ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ).


ಭಾರತ ರತ್ನ ಪ್ರಶಸ್ತಿಯನ್ನು ಪಡೆಯುವ ವ್ಯಕ್ತಿ ಭಾರತೀಯ ನಾಗರಿಕರಾಗಿರಬೇಕೆಂಬ ನಿಯಮವೇನಿಲ್ಲದಿದ್ದರೂ ಸಾಮಾನ್ಯವಾಗಿ ಇದನ್ನು ಪಾಲಿಸಲಾಗುತ್ತದೆ. ಭಾರತೀಯ ನಾಗರಿಕರಲ್ಲದಿದ್ದರೂ ಈ ಪ್ರಶಸ್ತಿಯನ್ನು ಪಡೆದ ಇಬ್ಬರೇ ವ್ಯಕ್ತಿಗಳೆಂದರೆ 


1)ನೆಲ್ಸನ್ ಮಂಡೇಲಾ (1990 ರಲ್ಲಿ) 


2)ಖಾನ್ ಅಬ್ದುಲ್ ಗಫಾರ್ ಖಾನ್ (1987 ರಲ್ಲಿ).


ಪ್ರಶಸ್ತಿ ಪದಕದ ಮೊದಲ ವಿನ್ಯಾಸದಂತೆ ವೃತ್ತಾಕಾರದ ಚಿನ್ನದ ಪದಕದ ಮೇಲೆ ಸೂರ್ಯನ ಚಿತ್ರ ಮತ್ತು ದೇವನಾಗರಿ ಲಿಪಿಯಲ್ಲಿ “ಭಾರತ ರತ್ನ”, ಮತ್ತು ಹಿಂಭಾಗದಲ್ಲಿ ಭಾರತದ ರಾಷ್ಟ್ರೀಯ ಚಿಹ್ನೆ ಮತ್ತು “ಸತ್ಯಮೇವ ಜಯತೇ” ಎಂದು ಬರೆಯಬೇಕೆಂದಿದ್ದಿತು. ಈ ವಿನ್ಯಾಸದ ಯಾವುದೇ ಪದಕವನ್ನು ಉಪಯೋಗಿಸಲಾಗಿಲ್ಲ. ಮುಂದಿನ ವರ್ಷವೇ ಪದಕದ ವಿನ್ಯಾಸವನ್ನು ಈಗಿನ ವಿನ್ಯಾಸಕ್ಕೆ ಬದಲಾಯಿಸಲಾಯಿತು.


ಪ್ರಶಸ್ತಿಗೆ ಭಾಜನರಾದ ವರ್ಷ – ಪುರಸ್ಕೃತರ ಹೆಸರು ಮತ್ತು ಅವರ ರಾಜ್ಯ/ ದೇಶ


1) 1954- ಎಸ್ ರಾಧಾಕೃಷ್ಣನ್ -ಆಂಧ್ರಪ್ರದೇಶ


2) 1954- ಸಿ.ರಾಜಗೋಪಾಲಚಾರಿ – ತಮಿಳುನಾಡು


3) 1954- ಡಾ.ಸಿ.ವ್ಹಿ.ರಾಮನ್ – ತಮಿಳುನಾಡು


4) 1955- ಭಗವಾನದಾಸ – ಉತ್ತರ ಪ್ರದೇಶ


5) 1955- ಸರ್.ಎಮ್.ವಿಶ್ವೇಶ್ವರಯ್ಯ – ಕರ್ನಾಟಕ


6) 1955- ಜವಾಹರಲಾಲ್ ನೆಹರು – ಉತ್ತರ ಪ್ರದೇಶ


7) 1957- ಪಂ.ಗೋ.ವಲ್ಲಭಿ ಪಂಥ – ಉತ್ತರ ಪ್ರದೇಶ


8) 1958- ಧೊಂಡೊ ಕೇಶವ ಕರ್ವೆ – ಮಹಾರಾಷ್ಟ್ರ


9)     1961- ಬಿಧಾನ್‌ ಚಂದ್ರ ರಾಯ್‌ – ಪಶ್ಚಿಮ ಬಂಗಾಳ


10) 1961- ಪುರುಷೋತ್ತಮದಾಸ ಟಂಡನ್ – ಉತ್ತರ ಪ್ರದೇಶ


11) 1962- ಡಾ.ರಾಜೇಂದ್ರ ಪ್ರಸಾದ್ – ಬಿಹಾರ


12) 1963- ಜಾಕೀರ್ ಹುಸೇನ್ – ಉತ್ತರ ಪ್ರದೇಶ


13) 1963- ಡಾ.ಪಾಂಡುರಂಗ ವಾಮನ ಕಾಣೆ – ಮಹಾರಾಷ್ಟ್ರ


14) 1966- ಲಾಲ್ ಬಹಾದ್ದೂರ ಶಾಸ್ತ್ರೀ – ಉತ್ತರ ಪ್ರದೇಶ


15) 1971- ಇಂದಿರಾಗಾಂಧಿ – ಉತ್ತರ ಪ್ರದೇಶ


16) 1975- ವ್ಹಿ.ವ್ಹಿ.ಗಿರಿ – ಒಡಿಶಾ


17) 1976- ಕೆ.ಕಾಮರಾಜ್ – ತಮಿಳುನಾಡು


18) 1980- ಮಧರ್ ಥೆರಿಸಾ -ಪಶ್ಚಿಮ ಬಂಗಾಳ (ಉತ್ತರ ಮ್ಯಾಸಿಡೋನಿಯಾ)


19) 1983- ವಿನೋಬಾ ಭಾವೆ – ಮಹಾರಾಷ್ಟ್ರ


20) 1987- ಖಾನ್ ಅಬ್ದಲ್ ಗಫಾರಖಾನ್ – ಪಾಕಿಸ್ತಾನ


21) 1988- ಎಂ.ಜಿ.ರಾಮಚಂದ್ರನ್ – ತಮಿಳುನಾಡು


22) 1990- ಡಾ.ಅಂಬೇಡ್ಕರ್ – ಮಹಾರಾಷ್ಟ್ರ


23) 1990- ನೆಲ್ಸನ್ ಮಂಡೇಲಾ – ದಕ್ಷಿಣ ಆಫ್ರಿಕಾ


24) 1991- ಮೊರಾರ್ಜಿ ದೇಸಾಯಿಯ – ಗುಜರಾತ್


25) 1991- ರಾಜೀವ್ ಗಾಂಧೀ – ಉತ್ತರ ಪ್ರದೇಶ


26) 1991- ಸರ್ದಾರ್ ಪಟೇಲ್ – ಗುಜರಾತ್


27) 1992- ಜೆ.ಆರ್.ಡಿ.ಟಾಟಾ – ಮಹಾರಾಷ್ಟ್ರ


28) 1992- ಮೌಲಾನಾ ಅಬ್ದುಲ್ ಕಲಾಂ ಆಜಾದ್ – ಪಶ್ಚಿಮ ಬಂಗಾಳ


29) 1992- ಸತ್ಯಜಿತ್ ರೇ – ಪಶ್ಚಿಮ ಬಂಗಾಳ


30) 1997- ಗುಲ್ಜಾರಿಲಾಲ್ ನಂದಾ – ಪಂಜಾಬ್


31) 1997- ಅರುಣಾ ಅಸಫ್ ಅಲಿ – ಪಶ್ಚಿಮ ಬಂಗಾಳ


32) 1997- ಎ.ಪಿ.ಜೆ.ಅಬ್ದುಲ್ ಕಲಾಂ – ತಮಿಳುನಾಡು


33) 1998- ಎಂ.ಎಸ್.ಸುಬ್ಬುಲಕ್ಷ್ಮಿ – ತಮಿಳುನಾಡು


34) 1998- ಸಿ. ಸುಬ್ರಹ್ಮಣ್ಯಂ – ತಮಿಳುನಾಡು




35) 1999- ಜಯಪ್ರಕಾಶ ನಾರಾಯಣ – ಬಿಹಾರ


36) 1999- ಅಮರ್ತ್ಯಸೇನ್ – ಪಶ್ಚಿಮ ಬಂಗಾಳ


37) 1999- ರವಿಶಂಕರ್ – ಶ್ಚಿಮ ಬಂಗಾಳ


38) 1999- ಗೋಪಿನಾಥ್ ಬೋರ್ಡೊಲೋಯಿ – ಅಸ್ಸಾಂ


39) 2001- ಉ.ಬಿಸ್ಮಲ್ಲಾಖಾನ್ -ಉತ್ತರ ಪ್ರದೇಶ


40) 2001- ಲತಾ ಮಂಗೇಶ್ಕರ್ -ಮಹಾರಾಷ್ಟ್ರ


41) 2008- ಭೀಮಸೇನ ಜೋಶಿ – ಕರ್ನಾಟಕ


42) 2013- ಸಚಿನ್ ತೆಂಡೂಲ್ಕರ್ – ಮಹಾರಾಷ್ಟ್ರ


43) 2013- ಸಿ.ಎನ್.ಆರ್.ರಾವ್ – ಕರ್ನಾಟಕ

44) 2015- ಮದನ ಮೋಹನ ಮಾಳ್ವೀಯಾ – ಉತ್ತರ ಪ್ರದೇಶ


45) 2015- ಅಟಲ ಬಿಹಾರಿ ವಾಜಪೇಯಿ – ಮಧ್ಯಪ್ರದೇಶ


46) 2019- ಪ್ರಣಬ್ ಮುಖರ್ಜಿ – ಪಶ್ಚಿಮ ಬಂಗಾಳ


47) 2019 – ಭೂಪೇನ್ ಹಜಾರಿಕಾ – ಅಸ್ಸಾಂ


48) 2019 – ನಾನಾಜಿ ದೇಶಮುಖ್ – ಮಹಾರಾಷ್ಟ್ರ


ST

Get Your Link BELOW